ನ್ಯಾಯಾಲಯದ ಕೃತ್ಯ, ಲೋಪ, ವಿಳಂಬ ಅಥವಾ ದೋಷದ ಕಾರಣದಿಂದ ಯಾವುದೇ ವ್ಯಕ್ತಿಗೆ ಅನ್ಯಾಯ ಅಥವಾ ನಷ್ಟ ಉಂಟಾಗಬಾರದು ಎಂಬುದು ಈ ಸೂತ್ರದ ಅರ್ಥ. ನ್ಯಾಯಾಲಯದ ಪ್ರಕ್ರಿಯೆಗಳೇ ಅನ್ಯಾಯಕ್ಕೆ ಕಾರಣವಾಗದಂತೆ ನ್ಯಾಯಾಲಯವು ನೋಡಿಕೊಳ್ಳಬೇಕು. ಈ ತತ್ವವು ಪುನಃಸ್ಥಾಪನೆ (Restitution) ಎಂಬ ಪರಿಹಾರ ತತ್ವದೊಂದಿಗೆ ನಿಕಟವಾಗಿ ಸಂಬಂಧಿಸಿದೆ.