ಅರ್ಥ ಮತ್ತು ವಿವರಣೆ: ಒಬ್ಬ ವ್ಯಕ್ತಿಯು ಒಂದೇ ವಿಚಾರದಲ್ಲಿ ಪರಸ್ಪರ ವಿರೋಧವಾಗಿರುವ (contradictory) ಹೇಳಿಕೆಗಳು ಅಥವಾ ವಾದಗಳನ್ನು ಮುಂದಿರಿಸಿ, ಒಂದು ಹಂತದಲ್ಲಿ ಒಂದು ನಿಲುವನ್ನು ತೆಗೆದುಕೊಂಡು ನಂತರ ಅದಕ್ಕೆ ವಿರುದ್ಧವಾದ ನಿಲುವನ್ನು ತೆಗೆದುಕೊಳ್ಳಲು ಸಾಮಾನ್ಯವಾಗಿ ಅವಕಾಶವಿಲ್ಲ ಎಂಬುದೇ ಈ ತತ್ವದ ಅರ್ಥ. ಒಬ್ಬ ಪಕ್ಷವು ನ್ಯಾಯಾಲಯದ ಮುಂದೆ ತನ್ನ ಹಿಂದಿನ ನಿಲುವಿಗೆ ವಿರುದ್ಧವಾಗಿ ನಡೆದುಕೊಂಡು ತನ್ನ ಅನುಕೂಲಕ್ಕಾಗಿ ಪರಸ್ಪರ ವಿರೋಧವಾದ ವಾದಗಳನ್ನು ಮುಂದಿಡುವುದನ್ನು ನ್ಯಾಯಾಲಯವು ಅನುಮತಿಸಬಾರದು. ಇದು consistency, estoppel ಮತ್ತು approbate and reprobate ತತ್ವಗಳಿಗೆ ಸಂಬಂಧಿಸಿದೆ.

 

ಉಲ್ಲೇಖಾರ್ಹ ಪ್ರಮುಖ ತೀರ್ಪು: R.N. Gosain v. Yashpal Dhir, (1992) 4 SCC 683