ಅರ್ಥ ಮತ್ತು ವಿವರಣೆ: ಇಬ್ಬರೂ ಪಕ್ಷಗಳು ಸಮಾನವಾಗಿ ಕಾನೂನುಬಾಹಿರ ಅಥವಾ ಅನೈತಿಕ ಕೃತ್ಯದಲ್ಲಿ (illegal or immoral act) ಭಾಗಿಯಾಗಿದ್ದರೆ, ನ್ಯಾಯಾಲಯವು ಸಾಮಾನ್ಯವಾಗಿ ಅಂತಹ ಕಾನೂನುಬಾಹಿರ ವ್ಯವಹಾರದಿಂದ ಪರಿಹಾರ ಪಡೆಯಲು ಯಾವುದೇ ಪಕ್ಷಕ್ಕೆ ಸಹಾಯ ಮಾಡುವುದಿಲ್ಲ. ವಿಶೇಷವಾಗಿ ಆಸ್ತಿ ಅಥವಾ ಹಣದ ವಿಷಯದಲ್ಲಿ, ಇಬ್ಬರೂ ಸಮಾನವಾಗಿ ತಪ್ಪಿತಸ್ಥರಾಗಿದ್ದರೆ, ವಸ್ತು ಅಥವಾ ಆಸ್ತಿ ಯಾರ ವಶದಲ್ಲಿದೆಯೋ ಅವರ ಸ್ಥಿತಿಗೆ ಕಾನೂನು ಸಾಮಾನ್ಯವಾಗಿ ಆದ್ಯತೆ ನೀಡುತ್ತದೆ. ಆದರೆ ಪಕ್ಷಗಳು ಸಮಾನವಾಗಿ ತಪ್ಪಿತಸ್ಥರಾಗಿಲ್ಲದಿದ್ದರೆ ಅಥವಾ ಕಾನೂನಿನಲ್ಲಿ ಮಾನ್ಯವಾದ exception ಇದ್ದರೆ, ಈ ತತ್ವ ಅನ್ವಯಿಸದೇ ಇರಬಹುದು.
ಉಲ್ಲೇಖಾರ್ಹ ಪ್ರಮುಖ ತೀರ್ಪು: Sita Ram v. Radhabai, AIR 1968 SC 534 : (1968) 1 SCR 805