ಅರ್ಥ ಮತ್ತು ವಿವರಣೆ: ಸ್ಥಿರಾಸ್ತಿಗೆ (immovable property) ಸಂಬಂಧಿಸಿದ ದಾವೆ ನ್ಯಾಯಾಲಯದಲ್ಲಿ ಬಾಕಿಯಿರುವಾಗ, ಆ ದಾವೆಯ ಪಕ್ಷಕಾರರು ಆ ಆಸ್ತಿಯನ್ನು ವರ್ಗಾಯಿಸಿದರೂ (transfer), ಅಂತಹ ವರ್ಗಾವಣೆ ದಾವೆಯಲ್ಲಿ ನಂತರ ನೀಡಲಾಗುವ ನ್ಯಾಯಾಲಯದ ತೀರ್ಪಿನ ಹಕ್ಕುಗಳು ಮತ್ತು ಪರಿಣಾಮಗಳಿಗೆ ಒಳಪಟ್ಟಿರುತ್ತದೆ ಎಂಬುದೇ ಈ ತತ್ವದ ಅರ್ಥ. ಇದರ ಉದ್ದೇಶ ದಾವೆ ಬಾಕಿಯಿರುವ ಸಂದರ್ಭದಲ್ಲಿ ಆಸ್ತಿಯ ಹಕ್ಕು ಅಥವಾ ಸ್ಥಿತಿಯನ್ನು ಬದಲಾಯಿಸಿ ನ್ಯಾಯಾಲಯದ ಅಂತಿಮ ತೀರ್ಪನ್ನು ನಿಷ್ಪ್ರಯೋಜಕವಾಗುವುದನ್ನು ತಡೆಯುವುದು. ಭಾರತದಲ್ಲಿ ಈ ತತ್ವವನ್ನು Transfer of Property Act, 1882 ರ Section 52ರಲ್ಲಿ statutory formನಲ್ಲಿ ಅಳವಡಿಸಲಾಗಿದೆ.

 

ಉಲ್ಲೇಖಾರ್ಹ ಪ್ರಮುಖ ತೀರ್ಪು: Jayaram Mudaliar v. Ayyaswami, (1972) 2 SCC 200