“Nemo Debet Bis Vexari Pro Una Et Eadem Causa” ಎಂಬುದು ಒಂದೇ ಕಾರಣ ಅಥವಾ ಒಂದೇ ಅಪರಾಧಕ್ಕಾಗಿ ಒಬ್ಬ ವ್ಯಕ್ತಿಯನ್ನು ಪುನಃ ಪುನಃ ವಿಚಾರಣೆ, ಕಾನೂನು ಕ್ರಮ ಅಥವಾ ಕಿರುಕುಳಕ್ಕೆ ಒಳಪಡಿಸಬಾರದು ಎಂಬ ಕಾನೂನು ತತ್ವವಾಗಿದೆ. ಇದರ ಮೂಲ ಉದ್ದೇಶವು ವ್ಯಕ್ತಿಯನ್ನು ಒಂದೇ ವಿಷಯದ ಬಗ್ಗೆ ನಿರಂತರವಾದ ಕಾನೂನು ಪ್ರಕ್ರಿಯೆಯಿಂದ ರಕ್ಷಿಸುವುದು ಮತ್ತು ಅಂತಿಮತೆಯನ್ನು (finality) ಖಚಿತಪಡಿಸುವುದಾಗಿದೆ.
ಈ ತತ್ವವು ಅಪರಾಧ ಕಾನೂನಿನಲ್ಲಿ “Double Jeopardy” ಎಂಬ ತತ್ವದೊಂದಿಗೆ ನಿಕಟವಾಗಿ ಸಂಬಂಧಿಸಿದೆ. ಭಾರತದ ಸಂವಿಧಾನದ Article 20(2) ಪ್ರಕಾರ, ಒಬ್ಬ ವ್ಯಕ್ತಿಯನ್ನು ಅದೇ ಅಪರಾಧಕ್ಕಾಗಿ ಒಂದಕ್ಕಿಂತ ಹೆಚ್ಚು ಬಾರಿ prosecute and punished ಮಾಡಲಾಗುವುದಿಲ್ಲ. ಇದೇ ರೀತಿಯ ರಕ್ಷಣೆಯು ಕೆಲವು ಸಂದರ್ಭಗಳಲ್ಲಿ ಕ್ರಿಮಿನಲ್ ಪ್ರಕ್ರಿಯಾ ಕಾನೂನಿನಲ್ಲಿಯೂ ಕಂಡುಬರುತ್ತದೆ. ಆದರೆ ಹಿಂದಿನ ಮತ್ತು ನಂತರದ ಪ್ರಕರಣಗಳು ನಿಜವಾಗಿಯೂ ಒಂದೇ ಅಪರಾಧ ಅಥವಾ ಒಂದೇ ಕಾರಣಕ್ಕೆ ಸಂಬಂಧಿಸಿವೆಯೇ ಎಂಬುದನ್ನು ಕಾನೂನಿನ ಪ್ರಕಾರ ಪರಿಶೀಲಿಸಬೇಕು.
ಉಲ್ಲೇಖಾರ್ಹ ಪ್ರಮುಖ ತೀರ್ಪು: Maqbool Hussain v. State of Bombay, AIR 1953 SC 325