ಅರ್ಥ ಮತ್ತು ವಿವರಣೆ: ಈ maxim self-incrimination (ಸ್ವಯಂ ಅಪರಾಧಾರೋಪಣೆ) ವಿರುದ್ಧದ ರಕ್ಷಣೆಯನ್ನು ಸೂಚಿಸುತ್ತದೆ. ಒಬ್ಬ ವ್ಯಕ್ತಿಯನ್ನು ತನ್ನದೇ ವಿರುದ್ಧ ಸಾಕ್ಷ್ಯ ನೀಡುವಂತೆ ಅಥವಾ ತನ್ನನ್ನೇ ಅಪರಾಧಕ್ಕೆ ಒಳಪಡಿಸುವ ರೀತಿಯಲ್ಲಿ ಬಲವಂತಪಡಿಸಬಾರದು. ಭಾರತೀಯ ಸಂವಿಧಾನದ Article 20(3) ಕೂಡ ಇದೇ ತತ್ವವನ್ನು ರಕ್ಷಿಸುತ್ತದೆ. ಆರೋಪಿತ ವ್ಯಕ್ತಿಗೆ ತನ್ನ ವಿರುದ್ಧದ ಪ್ರಕರಣದಲ್ಲಿ prosecution ಗೆ ಸಹಾಯ ಮಾಡುವ ರೀತಿಯಲ್ಲಿ ಬಲವಂತದ ಸಾಕ್ಷ್ಯವನ್ನು ನೀಡಿಸುವುದನ್ನು ಕಾನೂನು ನಿರ್ಬಂಧಿಸುತ್ತದೆ.
ಉಲ್ಲೇಖಾರ್ಹ ಪ್ರಮುಖ ತೀರ್ಪು: Selvi v. State of Karnataka, (2010) 7 SCC 263