ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕ: 4 ಮೇ 2020

ಕಾಯಂ ನ್ಯಾಯಮೂರ್ತಿಯಾಗಿ ನೇಮಕ: 23 ಸೆಪ್ಟೆಂಬರ್ 2021

ನಿವೃತ್ತಿ ದಿನಾಂಕ: 9 ಮಾರ್ಚ್ 2026

ವೃತ್ತಿಪರ ಪರಿಚಯ:

ನ್ಯಾಯಮೂರ್ತಿ ಮಕ್ಕಿಮನೆ ಗಣೇಶಯ್ಯ ಉಮಾ ಅವರು ಶೃಂಗೇರಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಜೆ.ಸಿ.ಬಿ.ಎಂ. ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದರು. ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಹಾಗೂ ಕುವೆಂಪು ವಿಶ್ವವಿದ್ಯಾಲಯದಿಂದ ಎಲ್‌.ಎಲ್‌.ಎಂ. ಪದವಿ ಪಡೆದರು. 16 ಆಗಸ್ಟ್ 1988ರಂದು ವಕೀಲರಾಗಿ ನೋಂದಾಯಿಸಿಕೊಂಡು ಉಡುಪಿ, ಗದಗ ಮತ್ತು ಬೆಂಗಳೂರಿನಲ್ಲಿ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳಲ್ಲಿ ವೃತ್ತಿ ನಡೆಸಿದರು. 25 ಫೆಬ್ರವರಿ 2008ರಂದು ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಂಡು, ವಿವಿಧ ಜಿಲ್ಲೆಗಳಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದರು. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದರು. 4 ಮೇ 2020ರಂದು ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡು, 23 ಸೆಪ್ಟೆಂಬರ್ 2021ರಂದು ಕಾಯಂ ನ್ಯಾಯಮೂರ್ತಿಯಾದರು.