ನೇಮಕಾತಿ ದಿನಾಂಕ: 1 ಜೂನ್ 2026
ಪ್ರಸ್ತುತ ಹೆಚ್ಚುವರಿ ನ್ಯಾಯಮೂರ್ತಿ ಅವಧಿ ಅಂತ್ಯ: 31 ಮೇ 2028
ವೃತ್ತಿಪರ ಪರಿಚಯ:
ನ್ಯಾಯಮೂರ್ತಿ ಬೃಂಗೇಶ ಮಹದೇವಪ್ಪ ಅವರು 1967ರಲ್ಲಿ ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ಜನಿಸಿದರು. ಮೈಸೂರಿನಲ್ಲಿ ಕಾನೂನು ಶಿಕ್ಷಣ ಪಡೆದು, ಕಾನೂನು ಪದವಿಯಲ್ಲಿ ಮೂರನೇ ರ‍್ಯಾಂಕ್ ಗಳಿಸಿದರು. 1991ರಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿ, 1998ರಲ್ಲಿ ಸಿವಿಲ್ ನ್ಯಾಯಾಧೀಶರಾಗಿ ನ್ಯಾಯಾಂಗ ಸೇವೆಗೆ ಸೇರಿದರು. ನಂತರ ಜಿಲ್ಲಾ ನ್ಯಾಯಾಧೀಶರಾಗಿ ಬಡ್ತಿ ಪಡೆದು ನ್ಯಾಯಾಂಗ ಸೇವೆಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು. 1 ಜೂನ್ 2026ರಂದು ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡರು.
