ಸುಪ್ರೀಂ ಕೋರ್ಟ್ ನೇಮಕಾತಿ ದಿನಾಂಕ: 6 ಫೆಬ್ರವರಿ 2023
ನಿವೃತ್ತಿ ದಿನಾಂಕ: 13 ಆಗಸ್ಟ್ 2028
ವೃತ್ತಿಪರ ಪರಿಚಯ:
ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರು 14 ಆಗಸ್ಟ್ 1963ರಂದು ಹೈದರಾಬಾದ್ನಲ್ಲಿ ಜನಿಸಿದರು. ವಾಣಿಜ್ಯ ಪದವಿ ಮತ್ತು ಕಾನೂನು ಪದವಿ ಪಡೆದ ಅವರು, 1988ರಲ್ಲಿ ವಕೀಲ ವೃತ್ತಿ ಆರಂಭಿಸಿದರು. 8 ಆಗಸ್ಟ್ 2008ರಂದು ಆಂಧ್ರಪ್ರದೇಶ ಹೈಕೋರ್ಟ್ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡು, 20 ಜನವರಿ 2010ರಂದು ಕಾಯಂ ನ್ಯಾಯಮೂರ್ತಿಯಾದರು. ತೆಲಂಗಾಣ ಹೈಕೋರ್ಟ್ ಸ್ಥಾಪನೆಯಾದಾಗ 1 ಜನವರಿ 2019ರಂದು ಅಲ್ಲಿನ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡರು. 14 ಅಕ್ಟೋಬರ್ 2019ರಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ಗೆ ವರ್ಗಾವಣೆಗೊಂಡರು. 14 ಫೆಬ್ರವರಿ 2021ರಂದು ಮಣಿಪುರ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 6 ಫೆಬ್ರವರಿ 2023ರಂದು ಭಾರತದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡರು.
