ಸುಪ್ರೀಂ ಕೋರ್ಟ್ ನೇಮಕಾತಿ ದಿನಾಂಕ: 5 ಡಿಸೆಂಬರ್ 2024

ನಿವೃತ್ತಿ ದಿನಾಂಕ: 16 ಡಿಸೆಂಬರ್ 2027

ವೃತ್ತಿಪರ ಪರಿಚಯ:

ನ್ಯಾಯಮೂರ್ತಿ ಮನಮೋಹನ್ ಅವರು ಮಾಡರ್ನ್ ಸ್ಕೂಲ್, ಹಿಂದೂ ಕಾಲೇಜು ಮತ್ತು ದೆಹಲಿ ವಿಶ್ವವಿದ್ಯಾಲಯದ ಕ್ಯಾಂಪಸ್ ಲಾ ಸೆಂಟರ್‌ನಲ್ಲಿ ಶಿಕ್ಷಣ ಪಡೆದರು. 1987ರಲ್ಲಿ ದೆಹಲಿ ವಕೀಲರ ಪರಿಷತ್ತಿನಲ್ಲಿ ವಕೀಲರಾಗಿ ನೋಂದಾಯಿಸಿಕೊಂಡರು. ಸುಪ್ರೀಂ ಕೋರ್ಟ್ ಮತ್ತು ದೆಹಲಿ ಹೈಕೋರ್ಟ್‌ಗಳಲ್ಲಿ ನಾಗರಿಕ, ಕ್ರಿಮಿನಲ್, ಸಾಂವಿಧಾನಿಕ, ತೆರಿಗೆ, ಮಧ್ಯಸ್ಥಿಕೆ ಮತ್ತು ಬೌದ್ಧಿಕ ಸ್ವತ್ತಿನ ಹಕ್ಕುಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ವಕೀಲರಾಗಿ ಕಾರ್ಯನಿರ್ವಹಿಸಿದರು. 2003ರಲ್ಲಿ ಹಿರಿಯ ವಕೀಲರಾಗಿ ನೇಮಕಗೊಂಡರು. 2008ರಲ್ಲಿ ದೆಹಲಿ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡು, 2009ರಲ್ಲಿ ಕಾಯಂ ನ್ಯಾಯಮೂರ್ತಿಯಾದರು. ಆರ್ಥಿಕವಾಗಿ ದುರ್ಬಲ ವರ್ಗಗಳ ಔಷಧಿ ಲಭ್ಯತೆ, ಮಕ್ಕಳ ಡಿಜಿಟಲ್ ಶಿಕ್ಷಣ, ಮಾನವ ಕಳ್ಳಸಾಗಣೆಯ ಸಂತ್ರಸ್ತ ಮಕ್ಕಳ ರಕ್ಷಣೆ ಮತ್ತು ಬೌದ್ಧಿಕ ಸ್ವತ್ತಿನ ಹಕ್ಕುಗಳಿಗೆ ಸಂಬಂಧಿಸಿದ ಹಲವು ಪ್ರಮುಖ ತೀರ್ಪುಗಳನ್ನು ನೀಡಿದರು. 9 ನವೆಂಬರ್ 2023ರಂದು ದೆಹಲಿ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾದರು ಮತ್ತು 29 ಸೆಪ್ಟೆಂಬರ್ 2024ರಂದು ಅದರ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡರು. 5 ಡಿಸೆಂಬರ್ 2024ರಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡರು.